ಅದುರು

ಗಣಿಯಿಂದ ಹೊರತೆಗೆದ ವಸ್ತುವಿಗೆ ಸಾಮಾನ್ಯವಾಗಿ ಈ ಹೆಸರಿದೆ (ಓರ್). ವೈe್ಞÁನಿಕದೃಷ್ಟಿಯಿಂದ ಹೇಳುವುದಾದರೆ ಲಾಭದಾಯಕವಾದ ಮತ್ತು ಉಪಯುಕ್ತವಾದ ಒಂದು ಅಥವಾ ಹಲವಾರು ಖನಿಜ (ನೋಡಿ- ಖನಿಜ) ಗಳನ್ನೊಳಗೊಂಡ ಶಿಲೆಯೇ ಅದುರು. ಶಿಲೆಯಲ್ಲಿ ಹುದುಗಿರುವ ಖನಿಜಕ್ಕೆ ಲಾಭದಾಯಕ ಬೆಲೆ ದೊರೆಯದಿದ್ದಲ್ಲಿ ಅದು ಅದುರೆನಿಸದೆ ಕೇವಲ ಖನಿಜವೆನಿಸುತ್ತದೆ (ಮಿನರಲ್).
	
ಹೀಗಾಗಿ ಖನಿಜ ಅದುರೆನಿಸಬೇಕಾದರೆ ಹಲವಾರು ಅಂಶಗಳನ್ನು ಗಣನೆಗೆ ತಂದುಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾದುದು ಆ ಖನಿಜಕ್ಕೆ ಮಾರುಕಟ್ಟೆಯಲ್ಲಿರುವ ಬೆಲೆ, ಅದನ್ನು ಹೊರತೆಗೆಯಲು ಕೈಗೊಳ್ಳುವ ಗಣಿಯ ಕೆಲಸಕ್ಕೆ ತಗಲುವ ವೆಚ್ಚ, ಗಣಿಯಿಂದ ಮಾರುಕಟ್ಟೆಗೆ ಅದನ್ನು ಸಾಗಿಸಲು ಉಂಟಾಗುವ ಖರ್ಚು-ಇತ್ಯಾದಿ. ಈ ಅಂಶಗಳಲ್ಲಿ ಯಾವುದಾದರೂ ಸರಿಬರದಿದ್ದಲ್ಲಿ ಖನಿಜ ಅದುರೆನಿಸಲಾರದು. ಒಂದು ದೃಷ್ಟಿಯಿಂದ ವಿವೇಚಿಸುವುದಾದರೆ ಖನಿಜಕ್ಷೇಪದ ಭೌಗೋಳಿಕ ಸ್ಥಾನವೂ ಅಷ್ಟೇ ಮುಖ್ಯವಾದುದು. ಉದಾ. ಹಿಮಟೈಟ್ ಕಬ್ಬಿಣದ ಮುಖ್ಯವಾದ ಅದುರುಗಳಲ್ಲೊಂದು. ಉತ್ತಮದರ್ಜೆಯ ಈ ಅದುರು ಹೇರಳವಾಗಿ ಹಿಮಾಲಯ ಪರ್ವತದ ಎತ್ತರ ಪ್ರದೇಶದಲ್ಲಿ ದೊರೆಯುತ್ತದೆಂದು ಊಹಿಸೋಣ. ಆ ಭೌಗೋಳಿಕ ಸನ್ನಿವೇಶದಲ್ಲಿ ನೂರಾರು ಜನ ಗಣಿಯ ಕೆಲಸ ಮಾಡುವುದೆಂದರೆ ದುಸ್ಸಾಧ್ಯ: ಒಂದುವೇಳೆ ಮಾಡಿದರೂ ಅದಕ್ಕೆ ತಗಲುವ ವೆಚ್ಚ ಬಹು ದುಬಾರಿ. ಹೀಗಾಗಿ ಗಣಿ ಉದ್ಯಮ ಲಾಭದಾಯಕವಾಗಿ ಪರಿಣಮಿಸದು. ಆ ಉತ್ತಮ ದರ್ಜೆಯ ಖನಿಜ ಅದುರೆನಿಸಿಕೊಳ್ಳಲಾರದು. ಆದರೆ ಮುಂದೆ ಹತ್ತಾರು ವರ್ಷಗಳಲ್ಲಿ ತಜ್ಞರು ಆ ಸನ್ನಿವೇಶಕ್ಕೆ ಅನುಗುಣವಾದ ರೀತಿಯಲ್ಲಿ ಗಣಿಯ ಕೆಲಸ ಮಾಡುವುದನ್ನು ರೂಢಿಸಿದಲ್ಲಿ ಆಗ ಇದೇ ಅತ್ಯುತ್ತಮ ಅದುರೆನಿಸಿಕೊಳ್ಳುವ ಸಾಧ್ಯತೆಯೂ ಉಂಟು. 
	
ಹೀಗೆಯೇ ಗಣಿ ಕೆಲಸ ಅದುರನ್ನು ಒಪ್ಪುಮಾಡುವಿಕೆ ಮುಂತಾದುವಕ್ಕೆ ತಗಲುವ ದುಬಾರಿ ವೆಚ್ಚ, ಮುಂಬರುವ ವರ್ಷಗಳಲ್ಲಿ ಕಡಿಮೆಯಾದಲ್ಲಿ ಇಂದು ಅದುರೆನ್ನಿಸಿಕೊಳ್ಳಲು ಅನರ್ಹವಾದ ಖನಿಜಕ್ಷೇಪ ಉತ್ತಮದರ್ಜೆಯ ಅದುರೆನಿಸಿಕೊಳ್ಳಬಲ್ಲುದು. ಈ ರೀತಿ ಹೊರ ಸಂಶೋಧನೆಗಳಿಂದ ಖನಿಜದ ಬಳಕೆ ವೃದ್ಧಿಗೊಂಡಲ್ಲಿ ಅದು ಉತ್ತಮ ಅದುರೆಂದು ನಿಯೋಜಿತವಾಗಲು ಸಾಧ್ಯತೆಗಳಿವೆ.
	
ಅದುರಿನ ಜೊತೆಯಲ್ಲಿ ಅನುಪಯುಕ್ತವಾದ ಹಲಕೆಲವು ಖನಿಜಗಳೂ ಇರುವುದುಂಟು. ಇವನ್ನು ಗ್ಯಾಂಗ್ ಎನ್ನುತ್ತಾರೆ. ಶಿಲೆಯಲ್ಲಿ ಅದುರು ಮತ್ತು ಗ್ಯಾಂಗ್ ಖನಿಜಗಳ ಪ್ರಮಾಣದಲ್ಲಿ ಏರುಪೇರುಗಳನ್ನು ಕಾಣಬಹುದು. ಇದು ಸಾಮಾನ್ಯವಾಗಿ ಅಲೋಹ ಖನಿಜವಾದರೂ ಹಲವು ಸಂದರ್ಭಗಳಲ್ಲಿ ಲೋಹ ಖನಿಜವಾದರೂ ಆಗಬಹುದು. ಅನೇಕವೇಳೆ ಇವು ಸಹ ಉಪಯೋಗಕ್ಕೆ ಬರುತ್ತವೆ. ಉದಾ: ಫ್ಲೂರೈಟ್, ಬೆಣಚು (ಕ್ವಾಟ್ರ್ಸ್), ವಿರೈಟ್ ಮುಂತಾದುವು. ಅದುರಿನ ಮುಖ್ಯ ಖನಿಜವನ್ನು ಒಪ್ಪಮಾಡುವ ವಿಧಾನಗಳಲ್ಲಿ ಇವು ಗಣನೀಯ ಪಾತ್ರ ವಹಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಅದುರು ಖನಿಜವನ್ನು ಗ್ಯಾಂಗ್ ಖನಿಜಗಳಿಂದ ಬೇರ್ಪಡಿಸುವುದೂ ಸಾಹಸದ ಕೆಲಸವಾದೀತು. ಈ ಬಗೆಯ ಲೋಹ ಸಂಶೋಧನೆಗೆ ಹೆಚ್ಚಿದ ವೆಚ್ಚವೂ ಆದೀತು. ಎಷ್ಟೋ ಗಣಿಗಳಲ್ಲಿ ಸುಮಾರು 20-25 ಟನ್ ಶಿಲೆಯನ್ನು ಒಪ್ಪಮಾಡಿದಲ್ಲಿ ಕೇವಲ ಒಂದು ಟನ್ ಅದುರು ಮಾತ್ರ ದೊರೆಯಬಹುದು.
	
ಅದುರಿನಲ್ಲಿ ದೊರೆಯುವ ಲೋಹಾಂಶದ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಅಲ್ಲದೆ ಒಂದೇ ಖನಿಜದ ವಿವಿಧ ಅದುರುಗಳಲ್ಲಿ ವಿವಿಧ ಬಗೆಯ ಲೋಹಾಂಶವನ್ನು ಗುರುತಿಸಬಹುದು. ಉತ್ತಮ ಉದಾಹರಣೆ- ತಾಮ್ರದ ಅದುರುಗಳು. ಇವುಗಳಲ್ಲಿ ಲೋಹಾಂಶ ನೂರಕ್ಕೆ ಒಂದರಿಂದ ಎಪ್ಪತ್ತೈದರವರೆಗೂ ಕಂಡುಬಂದಿದೆ. ಸೇಕಡಾ ಒಂದಂಶವನ್ನು ಪಡೆದಿರುವ ಅದುರು ಕಡಿಮೆ ದರ್ಜೆಯದು. ಇದರಲ್ಲಿ ಅಡಗಿರುವ ತಾಮ್ರವನ್ನು ಪಡೆಯಲು ಒಪ್ಪಮಾಡುವ ಕಾರ್ಯಕ್ಕೆ ಹೆಚ್ಚುವ್ಯಯವಾಗುತ್ತದೆ. ಆದರೆ 75% ಲೋಹಾಂಶವನ್ನುಳ್ಳ ಅದುರನ್ನು ಇಷ್ಟು ಕಷ್ಟವಿಲ್ಲದೆ ಸುಲಭವಾಗಿ, ಹೆಚ್ಚು ಖರ್ಚಿಲ್ಲದೆಯೂ ಒಪ್ಪಮಾಡಬಹುದು.
	
ಕೆಲವು ಲೋಹಗಳಿಗೆ ಉತ್ತಮ ಬೆಲೆಯಿರುವ ಕಾರಣ ಅದುರಿನಲ್ಲಿ ಅವು ಬಹುಕಡಿಮೆ ಪ್ರಮಾಣದಲ್ಲಿ ದೊರೆತರೂ ಅದುರಿಗೆ ಬೆಲೆ ಇದೆ. ಅಲಾಸ್ಕಾದಲ್ಲಿರುವ ಜ್ಯೂನೂ ಚಿನ್ನದ ಗಣಿಯಲ್ಲಿ ದೊರೆಯುವ ಅದುರಿನಲ್ಲಿ ಚಿನ್ನದ ಅಂಶ ನೂರಕ್ಕೆ ಕೇವಲ 0.00016ರಷ್ಟಿದ್ದರೂ ಚಿನ್ನಕ್ಕಿರುವ ಹೆಚ್ಚಿನ ಬೆಲೆಯ ಕಾರಣ ಅದು ಉತ್ತಮ ಅದುರೆನಿಸಿದೆ. ಒಂದು ಟನ್ ಅದುರಿನಲ್ಲಿ ಕೇವಲ 3-4 ಪೆನಿವೇಟುಗಳಷ್ಟು ಚಿನ್ನವಿದ್ದರೆ ಅದನ್ನು ಉತ್ತಮ ಅದುರೆಂದು ಭಾವಿಸಲಾಗಿದೆ. ಅಂದರೆ ಸುಮಾರು ಎರಡು ಲಕ್ಷ ಜನರಿಗೆ ಒಬ್ಬ ಸಾಹುಕಾರನಿದ್ದಂತೆ.
	
ಅದುರು ಒಂದೇ ಒಂದು ಲೋಹವನ್ನು ಹೊಂದಿರಬಹುದು ಅಥವಾ ಹಲವಾರು ಲೋಹಗಳನ್ನು ಹೊಂದಿರಬಹುದು. ಇವನ್ನು ಕ್ರಮವಾಗಿ ಸರಳ ಅದುರು, ಸಂಯುಕ್ತ ಅದುರು ಎಂದು ಕರೆಯಲಾಗಿದೆ. ಕಬ್ಬಿಣ, ಅಲ್ಯೂಮಿನಂ, ಕ್ರೋಮಿಯಂ, ತವರ, ಪಾದರಸ, ಮ್ಯಾಂಗನೀಸ್, ಟಂಗ್‍ಸ್ಟನ್- ಈ ಲೋಹಗಳ ಅದುರುಗಳು ಸಾಮಾನ್ಯವಾಗಿ ಸರಳ ಅದುರುಗಳು. ಆದರೆ ಚಿನ್ನ, ಬೆಳ್ಳಿ, ತಾಮ್ರ, ಸೀಸ, ಸತು, ನಿಕ್ಕಲ್, ಕೊಬಾಲ್ಟ್, ಆ್ಯಂಟಿಮನಿ- ಇವು ಸಂಯುಕ್ತ ಅದುರುಗಳಲ್ಲಿ ದೊರೆಯುತ್ತವೆ. ಉದಾ: ಕೇವಲ ಒಂದು ಅದುರಿನಲ್ಲಿ ತಾಮ್ರ ಚಿನ್ನ ಬೆಳ್ಳಿ ಸೀಸ ಹೀಗೆಯೇ ಬೆಳ್ಳಿ, ಸೀಸ, ಸತು, ತಾಮ್ರ, ಚಿನ್ನ; ತವರ, ಬೆಳ್ಳಿ, ಸೀಸ, ಸತು: ನಿಕ್ಕಲ್, ತಾಮ್ರ, ಚಿನ್ನ, ಪ್ಲಾಟಿನಂ- ಈ ಲೋಹಗಳ ಸಂಯುಕ್ತಅದುರುಗಳು ನಿಸರ್ಗದಲ್ಲಿ ಸರ್ವೆ ಸಾಮಾನ್ಯ. ಅದರಲ್ಲೂ ಗೌಣ ಲೋಹಗಳಾದ ಆರ್ಸೆನಿಕ್, ಬಿಸ್ಮತ್, ಕ್ಯಾಡ್ಮಿಯಂ, ಸೆಲೆನಿಯಂ ಮುಂತಾದವು ಇತರ ಪ್ರಧಾನ ಲೋಹಗಳೊಡನೆ ಬೆರೆತು ಸಂಯುಕ್ತಅದುರುಗಳಲ್ಲಿ ದೊರೆಯುತ್ತವೆ. ಅದುರನ್ನು ಒಪ್ಪಮಾಡಿ ಮುಖ್ಯ ಲೋಹಗಳನ್ನು ಪಡೆಯುವಾಗ ಇವು ಉಪವಸ್ತುಗಳಾಗಿ ದೊರೆಯುತ್ತವೆ. 
	
ಸಾಮಾನ್ಯವಾಗಿ ಅದುರುಗಳಲ್ಲಿ ಚಿನ್ನ-ಬೆಳ್ಳಿ, ಬೆಳ್ಳಿ-ಸೀಸ, ಸೀಸ-ಸತು, ಸತು-ತಾಮ್ರ, ತಾಮ್ರ-ಚಿನ್ನ, ಕಬ್ಬಿಣ-ಮ್ಯಾಂಗನೀಸ್, ಕಬ್ಬಿಣ-ಟೈಟೇನಿಯಂ, ನಿಕ್ಕಲ್-ತಾಮ್ರ, ನಿಕ್ಕಲ್-ಕೊಬಾಲ್ಟ್, ಕ್ರೋಮಿಯಂ-ಪ್ಲಾಟಿನಂ, ತವರ-ಟಂಗ್‍ಸ್ಟನ್, ಮಾಲಿಬ್ಡಿನಂ-ತಾಮ್ರ, ಸತು-ಕ್ಯಾಡ್ಮಿಯಂ- ಇವುಗಳ ಪರಸ್ಪರ ನಂಟನ್ನು ಕಾಣುತ್ತೇವೆ. 
	
ಅದುರಿನಲ್ಲಿ ಹುದುಗಿರುವ ಲೋಹಾಂಶವೇ ಟೆನರ್. ಇದನ್ನು ಸಾಮಾನ್ಯವಾಗಿ ಸೇಕಡಾವಾರಾಗಿಯೋ ಅಥವಾ ಅಮೂಲ್ಯ ಲೋಹಗಳಾದಲ್ಲಿ ಟನ್ನಿಗೆ ಇಷ್ಟು ಔನ್ಸುಗಳೆಂದೋ ವಿವರಿಸುತ್ತಾರೆ. ಲೋಹಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಬೆಲೆಗನುಗುಣವಾಗಿ ಅದುರಿನ ಟೆನರ್ ವ್ಯತ್ಯಾಸಗೊಳ್ಳುತ್ತದೆ. ಲೋಹದ ಬೆಲೆ ಹೆಚ್ಚಿದಷ್ಟೂ ಅದರ ಕೆಳದರ್ಜೆಯ ಅದುರುಗಳಿಗೂ ಒಳ್ಳೆಯ ಬೆಲೆ ಸಿಗುತ್ತದೆ. ಉದಾ: ಕಬ್ಬಿಣದ ಅದುರು ಲಾಭದಾಯಕವೆನಿಸಬೇಕಾದರೆ ಅದರಲ್ಲಿ ನೂರಕ್ಕೆ 35 ರಿಂದ 50ರಷ್ಟು ಲೋಹಾಂಶವಿದ್ದರೆ ಸಾಕು. ಆದರೆ ತಾಮ್ರದ ಅದುರಿನಲ್ಲಿ ಕೇವಲ 0.8% ರಷ್ಟೂ ಚಿನ್ನದ ಅದುರಿನಲ್ಲಿ 1/1000ರಷ್ಟು ಲೋಹಾಂಶವಿದ್ದರೆ ಸಾಕು.
ಲೋಹಗಳು ಮತ್ತು ಅವುಗಳ ಅದುರುಗಳು
ಲೋಹ
ಅಳತೆಯ ಏಕಮಾನ
ಟೆನರ್
ಸಾಮಾನ್ಯ ಸಂಯೋಜಿತ ವಸ್ತು

ಅಲ್ಪ
ಸರಾಸರಿ

ಚಿನ್ನ    ....
ಬೆಳ್ಳಿ    .... 
ಪ್ಲಾಟಿನಂ  .... 
ಕಬ್ಬಿಣ   .... 
ತಾಮ್ರ   ....
ಸೀಸ    ....
ಸತು    ....
ತವರ   ....
ನಿಕ್ಕಲ್   ....
ಅಲ್ಯೂಮಿನಿಯಂ
ಆ್ಯಂಟಿಮೊನಿ ....
ಬಿಸ್‍ಮತ್  ....
ಬೆರಿಲಿಯಂ  ....
ಆರ್ಸೆನಿಕ್  ....
ಕೊಬಾಲ್ಟ್  ....
ಕ್ರೋಮಿಯಂ ....
ಕ್ಯಾಡ್‍ಮಿಯಂ ....
ಮ್ಯಾಂಗನೀಸ್ ....
ಪಾದರಸ   ....
ಮಾಲಿಬ್ಡಿನಂ  ....
ಟೈಟೆನಿಯಂ  ....
ಟಂಗ್‍ಸ್ಟನ್  ....
ವೆನೇಡಿಯಂ ....
ಔನ್ಸ್/ಟನ್
ಔನ್ಸ್/ಟನ್
ಜೌನ್ಸ್/ಟನ್
% ಈe 
% ಅu
% Pb
% Zಟಿ
% Sಟಿ
% ಓi
% ಂಟ2ಔ3
% Sb
% ಃi
% ಃeಔ
% ಂs2ಔ3
% ಅo
% ಅಡಿ2ಔ3	
% ಅಜ
% ಒಟಿ	
% ಊg
% ಒoS2
% ಖಿiಔ2
% Wಔ3	
% ಗಿ2ಔ5 
0.15
10
 0.1
30
 0.7
3
3
 0.5
 1.5
30
20
 -
 8
 -
 5
32
 -
35
 0.5
 0.4
 3
 -
 2
0.2-0.3
 12-30
 0.3
 40-60
 1-5
 5-10
 10-30
 1-5
 1.5-3
 55-65
 40-60
 40-60
 10-12
  -
 8-10
 35-50
  -
 45-55
 1-3
 1-3
 4-40
 60-70
 3-8
ಬೆಳ್ಳಿ
ಚಿನ್ನ, ಸೀಸ
ಪ್ಲಾಟಿನಂ ವರ್ಗ
ಮ್ಯಾಂಗನೀಸ್
ಚಿನ್ನ, ಬೆಳ್ಳಿ
ಸತು, ಬೆಳ್ಳಿ
ಸೀಸ
ಟಂಗ್‍ಸ್ಟನ್
ತಾಮ್ರ, ಸೀಸ
-
ಬೆಳ್ಳಿ
ಟಂಗ್‍ಸ್ಟನ್
-
-
ಬೆಳ್ಳಿ, ತಾಮ್ರ
-
ಸತು
ಕಬ್ಬಿಣ
-
-
ಕಬ್ಬಿಣ
-
-

ಅನೇಕ ಅದುರುಗಳು ಲೋಹ ಖನಿಜಗಳಾಗಿವೆ. ಆದರೆ ಕೆಲವು ಅಲೋಹ ಖನಿಜಗಳೂ ಹೌದು. ಇವನ್ನು ಒಪ್ಪಮಾಡಿದಾಗ ಲೋಹಗಳನ್ನು ಪಡೆಯುತ್ತೇವೆ. ಉದಾ: ಮ್ಯಾಲಕೈಟ್ ಎಂಬ ಅದುರಿನಿಂದ ತಾಮ್ರ, ಬಾಕ್ಸೈಟ್ ಅದುರಿನಿಂದ ಅಲ್ಯೂಮಿನಂ ಮತ್ತು ಸೆರುಸೈಟ್ ಅದುರಿನಿಂದ ಸೀಸ ದೊರೆಯುತ್ತವೆ. ಅದುರು ಖನಿಜಗಳು ಸಹಜ (ನೇಟಿವ್) ಲೋಹಗಳಾಗಿಯೂ ದೊರೆಯಬಹುದು, ಇಲ್ಲವೆ ಇತರ ಖನಿಜ ಅಥವಾ ಧಾತುಗಳ ಸಂಯೋಗದೊಡನೆಯೂ ದೊರೆಯಬಹುದು. ಆದಾಗ್ಯೂ ಅನೇಕ ಅದುರುಗಳು ಎರಡನೆಯ ದರ್ಜೆಯವು.
	
ಒಂದು ಲೋಹಕ್ಕೆ ಒಂದೇ ಅದುರು ಎನ್ನುವಂತಿಲ್ಲ. ಒಂದೇ ಲೋಹಕ್ಕೆ ನಾನಾ ಬಗೆಯ ಅದುರುಗಳೂ ಇರಬಹುದು. ಉದಾ: ಚಾಲ್ಕೊಸೈಟ್, ಬೋರ್ನೈಟ್, ಚಾಲ್ಕೊಪಿರೈಟ್, ಕ್ಯುಪ್ರೈಟ್, ಮ್ಯಾಲಕೈಟ್ ಇವೆಲ್ಲ ತಾಮ್ರದ ಅದುರುಗಳು. ಇವು ಒಂದೇ ನಿಕ್ಷೇಪದಲ್ಲಿ ದೊರೆಯಬಹುದು. ಹೀಗೆಯೇ ಒಂದೇ ಅದುರಿನಿಂದ ಹಲವಾರು ಲೋಹಗಳನ್ನು ಪಡೆಯಬಹುದು. ಉದಾ: ಸೈನೈಟ್ ಅದುರಿನಿಂದ ತಾಮ್ರ ಮತ್ತು ಸತುವನ್ನು ಪಡೆಯಬಹುದು.						  
  
(ಎಂ.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ